ಸಂಪದ ದಲ್ಲಿ ನಾನು ಬರಿಯ ಪ್ರೇಕ್ಷಕನಾಗಿ ಅಲ್ಲಿ ಬರುವ ಲೇಖನಗಳನ್ನು ಓದುತ್ತಾ, "ಮೇರಾ ನಂಬರ್ ಭೀ ಆಯೇಗಾ" ಎಂದು ನನಗೆ ಸ್ಫೂರ್ತಿ ಬರಲಿ ಎಂದು ಕಾಯುತ್ತಿದ್ದೆ. ಆದರೆ, ಇತ್ತೀಚೆಗೆ, ಅದೇಕೋ "ಕಾರ್ಯ ಮೊದಲು, ಮಾತು ಆಮೇಲೆ" ಎಂಬ ಉಕ್ತಿಯಲ್ಲಿ ಬಹಳ ನಂಬಿಕೆ ಉಂಟಾಗಿದೆ. ಅದಕ್ಕೆ ಇವತ್ತಿನಿಂದಲೆ ಕನ್ನಡದಲ್ಲಿ ಬ್ಲಾಗ್ ಶುರು ಮಾಡಿದ್ದೇನೆ.
ಈ ಸಂವಾದದಲ್ಲಿ ಚರ್ಚಿಸಿರುವಂತೆ, ಕಂಪ್ಯೂಟರ್ ತಿಳಿದಿರುವವರು, ಆದಷ್ಟು ಹೆಚ್ಚು ಹೆಚ್ಚು ಮಟ್ಟಿಗೆ ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಿಸಬೇಕು. ಇದರಿಂದ, ತಾಂತ್ರಿಕೇತರ (non-technical?) ಕನ್ನಡಿಗರಲ್ಲಿ "ಇಂಟರ್ ನೆಟ್ ಕೇವಲ ಇಂಗ್ಲಿಷ್ ಬಲ್ಲವರ ಸೊತ್ತು" ಎಂಬ ತಪ್ಪು ಅಭಿಪ್ರಾಯ ತೊಲಗುತ್ತದೆ. ಕನ್ನಡಿಗರಿಗಿಂತಲೂ ಕಡಿಮೆ ಇರುವ ಎಷ್ಟೋ ಭಾಷಿಕರು ಅಂತರ್ ಜಾಲದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಕನ್ನಡಿಗರು ತಮ್ಮ ವಿಶ್ವಮಾನವ ಸ್ವರೂಪಕ್ಕೆ ಕಳೆ ತುಂಬಲು ಅಂತರ್ಜಾಲ ಬಹು ಉಪಯುಕ್ತ ಸಾಧನವಾಗಬಹುದು.
ಸರಿಯಾಗಲಿಲ್ಲವದು ಸರಿಯಿಲ್ಲವೆನುತ್ತ | ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ || ಕೊರೆಯಾದೊಡೇನಂದು? ನೆರೆಯಾದೊಡೇನಿನ್ನೊಂದು? | ಒರಟು ಕೆಲಸವೊ ಬದುಕು - ಮಂಕುತಿಮ್ಮ ||
© 2003-2011 Pradeep Gowda