Kannada Wikipedia Meet

Monday, 20 February 2006

ನಮಸ್ಕಾರ,

ನಿಮಗೆ ಗೊತ್ತಿರುವ ಹಾಗೆ ಕನ್ನಡ ವಿಕಿಪೀಡಿಯ , ಒಂದು ಮುಕ್ತ ವಿಶ್ವಕೋಶ. ವಿಕಿಪೀಡಿಯ ಮುಕ್ತಕೋಶದ ಮೂಲಕ ಕನ್ನಡ ಸಂಸ್ಕೃತಿ, ಸಾಹಿತ್ಯ, ಪರಂಪರೆಗಳ ಬಗ್ಗೆ ತಿಳಿಯಲು, ತಿಳಿಸಲು ಉತ್ತಮ ಅವಕಾಶವಿದೆ. . ಈ ನಿಟ್ಟಿನಲ್ಲಿ, ಕನ್ನ್ದಡ ವಿಕಿಪೀಡಿಯಾದ ಸಂಚಾಲಕರು ಕನ್ನಡ ವಿಕಿಪೀಡಿಯ ಪತ್ರಿಕಾಗೋಷ್ಠಿ ಮತ್ತು ಕೂಟವನ್ನು ಆಯೋಜಿಸಿದ್ದಾರೆ. ತಪ್ಪದೆ ಭಾಗವಹಿಸಿ.

ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತಿ ಇದ್ದಲ್ಲಿ ಈ blogpostನ ಕಮೆಂಟ್ ವಿಭಾಗದಲ್ಲಿ, ನಿಮ್ಮ ಹೆಸರನ್ನು ಸೇರಿಸಿ. ನಾನು ಆಯೋಜಕರಿಗೆ ವಿಷಯ ತಿಳಿಸುತ್ತೇನೆ

ವಿವರಗಳು ಇಂತಿವೆ

ಅಂತರ್ಜಾಲದಲ್ಲಿರುವ ನಿಮ್ಮ ನೆಚ್ಚಿನ ಕನ್ನಡ ವಿಶ್ವಕೋಶ ವಿಕಿಪೀಡಿಯದ ಬಗ್ಗೆ ತಿಳಿಯಲು, ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಶೀಘ್ರದಲ್ಲೆ ಒಂದು ಅಧಿವೇಷನ ಏರ್ಪಡಿಸಲಾಗುತ್ತಿದೆ. ಕನ್ನಡ ವಿಕಿಪೀಡಿಯ ಸದಸ್ಯರು ಹಾಗು ಆಸಕ್ತರು ಒಂದೆಡೆ ಕೂಡಿ ತಮ್ಮ ಆಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಳ್ಳಬಹುದಾದ ಈ ಅಧಿವೇಷನದಲ್ಲಿ ಕನ್ನಡ ವಿಕಿಪೀಡಿಯ ವಿಶ್ವಕೋಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಒಂದು ಪುಟ್ಟ ಪತ್ರಿಕಾ ಗೋಷ್ಟಿ ಕೂಡ ಏರ್ಪಡಿಸುತ್ತಿದ್ದೇವೆ. ಈ ಬಾರಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನೆಡೆಯುವುದು.ನೀವೂ ಈ ಕಾರ್ಯಕ್ರಮಕ್ಕೆ ಬನ್ನಿ, ನಿಮ್ಮ ಮಿತ್ರರನ್ನೂ ಕರೆತನ್ನಿ. ಬರಲಿಚ್ಚಿಸುವರು ದಯವಿಟ್ಟು ನೊಂದಾಯಿಸಿಕೊಳ್ಳಿ.

ಸೂಚನೆ

  • ಪ್ರವೇಶ ಉಚಿತ.
  • ಕಾರ್ಯಕ್ರಮಕ್ಕೆ ನೊಂದಾಯಿಸಿಕೊಂಡು ಬಂದಲ್ಲಿ ನಮಗೆ ಸರಿಯಾದ ಸೌಕರ್ಯ ಕಲ್ಪಿಸಲು ಸಹಾಯವಾಗುತ್ತದೆ.

    ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ ಸಿ ರೋಡ್, ಬೆಂಗಳೂರು. (ರವೀಂದ್ರ ಕಲಾಕ್ಷೇತ್ರದ ಪಕ್ಕ) ದಿನಾಂಕ: ಏಪ್ರಿಲ್ ೨, ೨೦೦೬ , ಭಾನುವಾರ ಸಮಯ: ಸಂಜೆ ೪.೦೦ ರಿಂದ ೮.೦೦

* ತಾತ್ಕಾಲಿಕ ಕಾರ್ಯ ಸೂಚಿ*

ಮೊದಲನೆ ಅವಧಿ * ಪತ್ರಿಕಾ ಗೋಷ್ಟಿ : ಕನ್ನಡ ವಿಕಿಪೀಡಿಯ, ವಿಕಿಮೀಡಿಯ ಸಂಸ್ಥೆ, ಮೀಡಿಯವಿಕಿ, ವಿಕಿ ತಂತ್ರಾಂಶ, ಕನ್ನಡ ವಿಕಿಪೀಡಿಯ ೧೦೦೦ ಲೇಖನಗಳ ಮೈಲಿಗಲ್ಲು ದಾಟುವಿಕೆ ಇತ್ಯಾದಿ ಬಗ್ಗೆ ವಿಶ್ಲೇಷಣೆ. (ಸುಮಾರು ೩೦ ನಿಮಿಷಗಳು) * ಅಲ್ಪ ವಿರಾಮ : ಕಾಫಿ/ಚಹಾ ವಿರಾಮ (೨೦ ನಿಮಿಷಗಳು)

ಎರಡನೆ ಅವಧಿ

  • ಸಂವಾದ ೧ : ಇಂಡಿಕ್?ಯೂನಿಕೋಡ್? ಏನಿವು? (೪೦ ನಿಮಿಷಗಳು)
    • ಸಂವಾದ ೨ : ನಿಮ್ಮ ಗಣಕದಲ್ಲಿ ಇಂಡಿಕ್ ಮತ್ತು ಯೂನಿಕೋಡ್ ಅಳವಡಿಸುವುದು ಹೇಗೆ? (೪೦ ನಿಮಿಷಗಳು)
    • ಅಲ್ಪ ವಿರಾಮ : ಲಘು ಉಪಹಾರ ಮತ್ತು ವಿಕಿಪೀಡಿಯ ಸದಸ್ಯರ ಅನೌಪಚಾರಿಕ ಮುಖಾಮುಖಿ (೨೦ ನಿಮಿಷಗಳು)

ಮೂರನೆ ಅವಧಿ

  • ಸಂವಾದ ೩ : ದೊಡ್ಡ ಸಹಕಾರ ಯೋಜನೆಗಳಿಗೆ ವಿಕಿಮೀಡಿಯ(೩೦ ನಿಮಿಷಗಳು) *ಸಂವಾದ ೪ : ವಿಕಿಪೀಡಿಯ ಬಳಕೆದಾರರ ಹಾಗು ಸದಸ್ಯರ ಅನುಭವ ಕಥನ(೩೦ ನಿಮಿಷಗಳು)

ನಾಲ್ಕನೆ ಅವಧಿ

  • ಚರ್ಚೆ: ಮುಂದಿನ ಹೆಜ್ಜೆಗಳು, ಹೆಚ್ಚಿನ ಜನರು ಈ ಯೋಜನೆಯಲ್ಲಿ ಭಾಗವಹಿಸಲು ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ.(೩೦ ನಿಮಿಷಗಳು).