My First Kannada Blog Post!

Monday, 09 May 2005

(This post is in Kannada UTF-8 encoding. Please read these instructions , to enable UTF-8 encoding on your computer)

ಬಹಳ ದಿನಗಳ ಪ್ರಯತ್ನದ ನಂತರ, ಇಂದು ಕನ್ನಡದಲ್ಲಿ ನನ್ನ ಪ್ರಥಮ blog post ಅನ್ನು ಮಾಡುತ್ತಿದ್ದೇನೆ. ಕನ್ನಡ ಕೀಲಿಮಣೆಯ ವಿನ್ಯಾಸ ಗೊತ್ತಿಲ್ಲವೆಂಬ ಸಬೂಬು ಕೇಳಿ ನನಗೇ ಬೇಸರವಾಗಿತ್ತು. :)

*ಸಹಸ್ರ ಪದಿಯ ತಳಮಳ*
ಒಂದು ಸಹಸ್ರ ಪದಿಯನ್ನು ಯಾರೋ ಕೇಳಿದರಂತೆ – ನೀವು ಹೇಗೆ ನಡೆಯುತ್ತೀರಿ ಎಂದು. ಅದು ಯೋಚನೆ ಮಾಡಲು ನಿಂತದ್ದು ಮತ್ತೆ ಮುಂದಕ್ಕೆ ಒಂದು ಹೆಜ್ಜೆಯನ್ನೂ ಇಡಲಾಗಲಿಲ್ಲವಂತೆ.
ನನ್ನ ಕನ್ನಡ ಬ್ಲಾಗಿಗೂ ಈ ಗತಿ ಬರುವುದು ಬೇಡವೆಂದು, ಇಂದು ಶುಭಾರಂಭ ಮಾಡಿದ್ದೇನೆ.

ಕನ್ನಡದಲ್ಲಿ ಹೆಚ್ಚು ಹೆಚ್ಚು ಜನರು, ಬ್ಲಾಗ್ ಮಾಡಿದಲ್ಲಿ, ಅಂತಜಾ೯ಲದಲ್ಲಿ ಕನ್ನಡದ ಬಳಕೆ ಹರಡುವುದೆಂಬ ಭರವಸೆ ನನಗಿದೆ.


Comments:

Nayan on 2005-06-16 06:55:50 said :
Nimma prathama kannada blog thumba channagide :)