ರಾವಣ ಅಂತ ಹೆಸರು ಯಾಕೆ ಇಟ್ಕೋಬಾರ್ದು?

Saturday, 11 November 2006

ರಾವಣ ಮಹಾನ್ ಪಂಡಿತ, ಶಿವನನ್ನ್ದೇ ಮೆಚ್ಚಿಸಿ ವರ ಪಡೆದವನು. ತನ್ನ ಅಹಂಗೆ ಬಲಿಯಾಗಿ ಸೀತೆನ ಅಪಹರಿಸಿದ. ಆ ಒಂದು ತಪ್ಪಿಗೆ ಅವನಿಗೆ ಅಷ್ಟೋಂದು ಅನ್ನಬೇಕಾ ಅಂತ ಸಂಸ್ಕೄತ ಮೇಷ್ಟ್ರಿಗೆ ಪ್ರಶ್ನೆ ಹಾಕಿದೆ. ಅದಕ್ಕೆ ಅವರು ಸ್ವಲ್ಪ ಖಾರವಾಗಿಯೇ ಬಯ್ದು, ಕೊನೆಗೆ "ನಿನ್ನ ಹೆಸರು ರಾವಣ ಅಂತ್ಲೇ ಇಟ್ಕೋ" ಅಂತದ್ರು. ಲಂಕೇಶ್ ಅಂತ ಹೆಸರು ಇಟ್ಕೊಂಡಿದಾರಲ್ಲಾ ಅಂತ ಹೇಳುವ ಮನಸ್ಸಾದ್ರು, ಲಂಕೇಶರ ಹೆಸರು ಕೇಳಿದಾಗ ಉರಿದು ಬಿಳುವ ಜನರನ್ನ ನೋಡಿದ್ದ ನಾನು ಏನೂ ಹೇಳದೆ ಸುಮ್ಮನಾದೆ.ಇದು ಯಾಕೆ ನೆನಪು ಬಂತೂ ಅಂತೀರ. ಓದೋಕ್ಕೆ ಪುಸ್ತಕ ಹುಡುಕುವಾಗ ಲಂಕೇಶರ 'ಟೀಕೆ-ಟಿಪ್ಪಣಿ' ಸಿಕ್ತು. ಇದು ಅವರ ಪತ್ರಿಕೆಯ ಸಂಪಾದಕೀಯಕ್ಕೆ ಬರೆದ ಲೇಖನಗಳ ಸಂಕಲನ.

ಲಂಕೇಶರ ನೆನಪು

ಸ್ಕೂಲಿನಲ್ಲಿದ್ದಾಗ ಪ್ರತಿ ವಾರ ಅಪ್ಪಾಜಿ ಲಂಕೇಶ್ ಪತ್ರಿಕೆ ತರುವುದನ್ನೇ ಕಾಯುತ್ತಿದ್ದೆ. ನನಗೆ ಆಗ ಬಹಳ ಇಷ್ಟವಾಗುತ್ತಿದ್ದುದು ಚಂದ್ರೇಗೌಡರ "ಬಯಲುಸೀಮೆ ಕಟ್ಟೆ ಪುರಾಣ". ಪ್ರಸಕ್ತ ರಾಜಕೀಯದ ವ್ಯಂಗ್ಯ ಮಾಡುತ್ತಿದ್ದ ಆ ಕಲಂ, ಬಯಲುಸೀಮೆ ಹಳ್ಳಿಯೊಂದರ ಪಾತ್ರಗಳ(?)ನ್ನು ಕಣ್ಣ ಮುಂದೆ ಕಟ್ಟಿ ನಿಲ್ಲಿಸುತ್ತಿತ್ತು. ಅದನ್ನ್ಗು ಬಿಟ್ಟರೆ, ಉಳಿದ ನೆನಪು ಲಂಕೇಶರ ಮತ್ತು ತೇಜಸ್ವಿಯವರ ಕಲಂಗಳದ್ದು.

ಬ್ಲಾಗಿಂಗ್ ಮತ್ತು ಲಂಕೇಶ್

ಪುಸ್ತಕದ ಹೊದಿಕೆಯಲ್ಲಿ,

ಈ ಹತ್ತೂವರೆ ವರ್ಷದ ಬರವಣಿಗೆಯ ಪರಿಣಾಮ... ಒಮ್ಮೆಯೂ ನಾನು ಕಾಯಿಲೆಯಿಂದ ಮಲಗಲಿಲ್ಲ. ಇದಕ್ಕೆ ಮುಖ್ಯ ಕಾರಣ, ಈ ಅವಧಿಯಲ್ಲಿ ನನಗೆ ಸಿಕ್ಕ ನೆಮ್ಮದಿ ಮತ್ತು ಮಾನಸಿಕ ಚೈತನ್ಯ. ವಾರದಿಂದ ವಾರಕ್ಕೆ ಓದುಗರ ಕಾತರ, ನಿರೀಕ್ಷೆಯನ್ನು ಸ್ವಾಗತಿಸುತ್ತಾ, ಅವರ ಬಗ್ಗೆ ನನಗಿರುವ ಹೊಣೆಯನ್ನರಿತು ಬರೆಯುತ್ತಾ ಹೋದೆ; ನಾನೇ ಬೆಳೆಯುತ್ತಾ ಹೋದೆ ಎಂದು ತಿಳಿಯುತ್ತೇನೆ....

ಎಂದು ಲಂಕೇಶರು ಬರೆಯುತ್ತಾರೆ.

ಈ ಮಾತು ಕನ್ನಡದಲ್ಲಿ ಬ್ಲಾಗ್ ಮಾಡುವವರಿಗೆ ನುಡಿಮುತ್ತಲ್ಲದೇ ಮತ್ತೇನು? ಕನ್ನಡಕ್ಕೆ ಬ್ಲ್ಲಾಗಿಂಗ್ ಎಂಬ technology driven, social journalism ಹೊಸತಾದರೂ, ಲಂಕೇಶರು ಬರೆದಂತಹ grassroot journalism ಹೊಸತಲ್ಲ. "ಟೀಕೆ-ಟಿಪ್ಪಣಿ"ಯಲ್ಲಿ ವ್ಯಕ್ತಿ ಚಿತ್ರಣಗಳಿವೆ, ರಾಜಕೀಯ ವಿಶ್ಲೇಷಣೆ ಇದೆ, ಕನ್ನಡ ಬರಹಗಾರ/ಬರಹಗಾರ್ತಿಯರ ಬಗ್ಗೆ criticism ಇದೆ. ಈ ಪುಸ್ತಕ ತಿರುವಿ ಹಾಕಿದವರಿಗೆ ೮೦-೯೦ರ ದಶಕದ ಕನ್ನಡ/ಕರ್ನಾಟಕ/ವಿಶ್ವದ ಆಗುಹೋಗುಗಳ critical ನೋಟ ಕಾಣಬರುತ್ತದೆ.

ರಾಜೇಂದ್ರ ಚೆನ್ನಿಯವರು "ಡೆಕ್ಕನ್ ಹೆರಾಲ್ಡ್" ನಲ್ಲಿ

The Kannada cosmos is so rich, varied and plural that no intelligent, sensitive, Kannada speaking individual would ever feel maimed or incomplete for being a part of it. This should be reason enough to celebrate Kannada Rajyotsava with confidence and a sense of belonging...
ಅಂತ ಹೇಳಿದ್ದು ಎಷ್ಟು ಸಮಂಜಸ ಅನ್ನೋದನ್ನ ತಿಳಿಯೋದಿಕ್ಕೆ ಲಂಕೇಶರ ಬರಹಗಳು ಒಂದು ಚಿಕ್ಕ ನಿದರ್ಶನ.